ಶ್ರೀ ಎಂ. ಕೃಷ್ಣಪ್ಪ
       ವಸತಿ ಸಚಿವರು

ಶ್ರೀ ರಾಜೀವ್ ಚಾವ್ಲಾ ,   
ಭಾ.ಆ.ಸೇ    
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು  Service for Submitting Suggestions for Karnataka Real Estate (Regulation and Development) Rules-2016 has been closed
  • 1
  • 2
  • 3
11 22 33
Animation Gallery by WOWSlider.com v4.4

About Us...

ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯು ಈ ಹಿಂದೆ ಸಂಯುಕ್ತ ಇಲಾಖೆಯಾಗಿದ್ದು, ಸರ್ಕಾರದ ಆದೇಶ ಸಂ: ಡಿಪಿಎಆರ್ 391 ಎಸ್ಇ 95, ದಿನಾಂಕ: 22.11.1995 ರನ್ವಯ 2 ಇಲಾಖೆಗಳಾಗಿ ವಿಭಜನೆಗೊಂಡು ವಸತಿ ಇಲಾಖೆಯಾಗಿ ಹಾಗೂ ನಗರಾಭಿವೃದ್ಧಿ ಇಲಾಖೆಯಾಗಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರಗಳ ನಿರ್ದೇಶನದಂತೆ ರಾಜ್ಯ ಗ್ರಾಮೀಣ ಮತ್ತು ನಗರ ಪ್ರದೇಶದ ಭಾಗದಲ್ಲಿರುವ ಆಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲ ವರ್ಗದವರಿಗೆ ಅವಶ್ಯಕತೆಯಿರುವ ಜನರಿಗೆ ಸೂರನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಈ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ವಸತಿ ಇಲಾಖೆಯು ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಂಡಿರುವುದಲ್ಲದೆ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿಯೂ ಸಹ ಆಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಸತಿ ಇಲಾಖೆಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವು :

1. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ – ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಕಂಪನಿ ಅಧಿನಿಯಮದ ಅಡಿಯಲ್ಲಿ ರಚಿತವಾಗಿರುವ ರಾಜ್ಯ ಸರ್ಕಾರದ ಒಂದು ಸಂಸ್ಥೆಯಾಗಿದ್ದು, ಈ ಸಂಸ್ಥೆಯು 10 ಕೋಟಿ ರೂಗಳ ಅಧಿಕೃತ ಬಂಡವಾಳದೊಂದಿಗೆ 2000 ಇಸವಿಯಲ್ಲಿ ಸ್ಥಾಪಿತವಾಗಿ 3 ಕೋಟಿ ರೂಗಳ ಪಾವತಿಸಿದ ಬಂಡವಾಳ ಹೊಂದಿರುತ್ತದೆ. ಈ ಸಂಸ್ಥೆಗಳ ಪ್ರಮುಖ ಧ್ಯೇಯೋದ್ದೇಶಗಳು:
•   ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟ ವಸತಿ ಯೋಜನೆಗಳಡಿ ವಸತಿ ಸೌಕರ್ಯವನ್ನು ಒದಗಿಸುವುದು.
•   ಪರಿಣಾಮಕಾರಿ ಬೆಲೆಗಳಲ್ಲಿ ಪರಿಸರ ಸ್ನೇಹಿಯಾಗಿ ಉತ್ತಮ ತಂತ್ರಜ್ಞಾನದ ಬಳಕೆಯಿಂದ ಕಡಿಮ ದರದಲ್ಲಿ ಮನೆಗಳ ನಿರ್ಮಾಣ.
•   ಮಿತವ್ಯಯಕಾರಿ ಹಾಗೂ ಬಲಯುತವಾದ ಬಾಳಿಕೆಯಿರುವ ಕಟ್ಟಡ ಸಾಮಗ್ರಿಗಳನ್ನು ಹಾಗೂ ನೂತನ ತಂತ್ರಜ್ಞಾನದಿಂದ ಫಲಾನುಭಿವಗಳಿಗೆ ಉತ್ತಮ ಶೈಲಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು.
•   ವಿಧವೆಯರಿಗಾಗಿ, ಕುಷ್ಠ ರೋಗಿಗಳಿಗೆ, ಹೆಚ್ಐವಿ ರೋಗ ಪೀಡಿತರಿಗಾಗಿ ಮುಂತಾದ ವರ್ಗದವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ವಸತಿ ಸೌಲಭ್ಯ ಕಲ್ಪಿಸಿಕೊಡುವುದು.
•   ವಿಶೇಷ ಗುಂಪು ವಸತಿ ಯೋಜನೆಯಡಿ- ವಿಶೇಷ ಆದಾಯ ವರ್ಗಗಳಾದ ಕುಶಲಕರ್ಮಿಗಳಿಗೆ, ನೇಕಾರರಿಗೆ, ಬೀಡಿ ಕಾರ್ಮಿಕರಿಗೆ ಹಾಗೂ ಮುಂತಾದವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವುದು.
•   ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿನೂತನ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು.

2. ಕರ್ನಾಟಕ ಗೃಹ ಮಂಡಳಿ – ಕರ್ನಾಟಕ ಗೃಹ ಮಂಡಳಿಯು 1962ರಲ್ಲಿ ರಚಿತವಾಗಿದ್ದ ಮೈಸೂರು ಗೃಹ ಮಂಡಳಿಯನ್ನು 1956ರಲ್ಲಿ ರಚಿತವಾಗಿದ್ದು, ತದನಂತರ ಕರ್ನಾಟಕ ಗೃಹ ಮಂಡಳಿ ಅಧಿನಿಯಮ 1962ರಡಿಯಲ್ಲಿ ಕರ್ನಾಟಕ ಗೃಹ ಮಂಡಳಿಯಾಗಿ ಮರುನಾಮಕರಣ ಮಾಡಲಾಗಿದೆ. ಸದರಿ ಮಂಡಳಿಯ ಉದ್ದೇಶ ಖವಸತಿ ಸ್ಥಳಾವಕಾಶದ ಬಗೆಗೆ ವ್ಯವಹರಿಸುವ ಮತ್ತು ಸಾರ್ವಜನಿಕರಿಗೆ ವಸತಿ ಅಗತ್ಯತೆಯನ್ನು ಪೂರೈಸುವ ಉದ್ದೇಶಕ್ಕಾಗಿ ಅವಶ್ಯವಿರುವಂತಹ ಯೋಜನೆಗಳನ್ನು ರೂಪಿಸುವುದು ಮತ್ತು ಅಂತಹ ಕಾಮಗಾರಿಗಳನ್ನು ನಿರ್ವಹಿಸುವುದುಖ ಹಾಗು ಹಂಚಿಕೆ ಮಾಡುವುದು ಈ ಉದ್ದೇಶದೊಂದಿಗೆ ಕರ್ನಾಟಕ ಗೃಹ ಮಂಡಳಿಯು ಜನರಿಗೆ ಮನೆ/ನಿವೇಶನವನ್ನು ಸುಲಭ ಬೆಲೆಯಲ್ಲಿ ಒದಗಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಇದು ಕರ್ನಾಟಕದಾದ್ಯಂತ ಗೃಹ ನಿರ್ಮಾಣದ ಅತ್ಯಂತ ಪ್ರಮುಖ ಸಂಸ್ಥೆಯಾಗಿದೆ.

3. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ – ಕರ್ನಾಟಕ ರಾಜ್ಯದ ನಗರ/ಪಟ್ಟನ ಪ್ರದೇಶದಲ್ಲಿ ಇರುವ ಕೊಳಚೆ ಪ್ರದೇಶಗಲ ನಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಕೊಳಚೆ ಪ್ರದೇಶ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯಿದೆ 1973ರ ಅಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯನ್ನು ಜೂಲೈ 1975ರಲ್ಲಿ ಸ್ಥಾಪಿಸಲಾಯಿತು. ನಂತರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಾಗಿ ಮರು ನಾಮಕರಣ ಮಾಡಲಾಗಿದೆ. ಕಾಯಿದೆಯಂತೆ ಮಂಡಳಿಯು 5 ಅಧಿಕಾರೇತರ ಸದಸ್ಯರು ಮತ್ತು 8 ಅಧಿಕಾರಿ ಸದಸ್ಯರುಗಳನ್ನು ಹೊಂದಿರುತ್ತದೆ. ಅಧ್ಯಕ್ಷರು ಮಂಡಳಿಯ ಮುಖ್ಯಸ್ಥರಾಗಿರುತ್ತಾರೆ. ಅಯುಕ್ತರು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಎಲ್ಲಾ ಯೋಜನೆಗಳ ಅನುಷ್ಠಾನದ ಜವಾಬ್ದಾರರಾಗಿರುತ್ತಾರೆ. ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ವಸತಿ ರಹಿತ ಕೊಳಗೇರಿ ನಿವಾಸಿಗಳಿಗೆ ವಸತಿ ಸೌಕರ್ಯ ಒದಗಿಸುವ ಮೂಲ ಉದ್ದೇಶವನ್ನು ಮಂಡಳಿ ಹೊಂದಿರುತ್ತದೆ.


Digits Counter